ಕುತ್ಯಾರು: ವಿಶ್ವಕರ್ಮ ಯೋಜನೆ ನೋಂದಣಿಗೆ ಚಾಲನೆ

ಕಾಪು, ಡಿ.24: ಕುತ್ಯಾರು ಗ್ರಾಮ ಪಂಚಾಯತ್ ಬಳಿ ರವಿವಾರ ಹಮ್ಮಿಕೊಳ್ಳಲಾದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜ ನೆಯ ನೋಂದಣಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಒಂದು. ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಕೂಡ ಯಾವುದೇ ಹಂಗಿಲ್ಲದೆ ಬದುಕಬೇಕು ದುಡಿಯುವ ಕೈಗಳಿಗೆ ಒಂದಷ್ಟು ಕೆಲಸ ನೀಡಬೇಕು ಎಂಬ ಯೋಚನೆ ಇಟ್ಟುಕೊಂಡು ಜಾರಿಗೆ ತಂದಿರುವ ಯೋಜನೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಎಂದರು.
ಈ ಸಂದರ್ಭದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಆಚಾರ್ಯ, ಉಪಾಧ್ಯಕ್ಷೆ ಭಾರತಿ ರಾಘವೇಂದ್ರ, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Next Story





