ಒಣಗಲು ಹಾಕಿದ ಅಡಿಕೆ ಕಳವು

ಕೋಟ: ಬೇಳೂರು ಗ್ರಾಮದ ದೇವಸ್ಥಾನಬೆಟ್ಟು ಎಂಬಲ್ಲಿರುವ ಜಮೀನಿನಲ್ಲಿ ಬೆಳೆದ ಸುಮಾರು 20 ಚೀಲದಷ್ಟು ಅಡಿಕೆಯನ್ನು ಅಡಿಕೆಯನ್ನು ಅಲ್ಲಿಯೇ ಇದ್ದ ಶೆಡ್‌ನ ಟೇರಸ್ ಮೇಲೆ ತಿಂಗಳ ಹಿಂದೆ ಒಣಗಿಸಲು ಹಾಕಿದ್ದು, ಅದನ್ನ ನಿನ್ನೆ ರಾತ್ರಿ ಯಾರೋ ಕದ್ದೊಯ್ದಿರುವುದಾಗಿ ಕುಂದಾಪುರದ ಸಂತೋಷ್‌ಕುಮಾರ್ ಎಂಬವರು ಕೋಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಜಮೀನಿನಲ್ಲಿ ಬೆಳೆದ ಸುಮಾರು 20 ಚೀಲದಷ್ಟು ಅಡಿಕೆಯನ್ನು ತಿಂಗಳ ಹಿಂದೆ ಕೊಯ್ಯಿಸಿ ಅಲ್ಲಿನ ಶೆಡ್ ಟೆರೇಸ್ ಮೇಲೆ ಒಣಗಿಸಲು ಹಾಕಿ ಅದಕ್ಕೆ ಸೋಲಾರ್ ಶೀಟ್‌ನ ಮಾಡನ್ನು ಮಾಡಿ ಬಂದ್ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿರುವ ಸಂತೋಷ್ ಕುಮಾರ್ ಇಂದು ಬೆಳಗ್ಗೆ ಹೋಗಿ ನೋಡಿದಾಗ ಒಣಗಿಸಿದ ಅಡಿಕೆ ಇರಲಿಲ್ಲ ಎಂದು ತಿಳಿಸಿದ್ದಾರೆ.
ರವಿವಾರ ಸಂಜೆ ತಾನು ನೋಡಿದಾಗ ಅಡಿಕೆ ಇದ್ದಿರುವುದಾಗಿ ಕೆಲಸಗಾರ ಹೆರಿಯ ಪೂಜಾರಿ ತಿಳಿಸಿದ್ದು, ಹೀಗಾಗಿ ಡಿ.24ರ ಸಂಜೆ 6:00ರಿಂದ ಇಂದು ಬೆಳಗ್ಗೆ 9:30ರ ನಡುವೆ ಯಾರೋ ಕಳ್ಳರು ಬಂದು 1.20ಲಕ್ಷ ರೂ.ಮೌಲ್ಯದ ಅಡಿಕೆಯನ್ನು ಕದ್ದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಕೋಟ ಪೊಲೀಸರು ತನಿಖೆ ನಡೆಸುತಿದ್ದಾರೆ.





