ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಸಾಂದರ್ಭಿಕ ಚಿತ್ರ
ಹಿರಿಯಡ್ಕ: ಹೊಳೆಯ ನೀರಿನಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್ನ ಪಟ್ಟಿಬಾವು ಹೊಳೆಯಲ್ಲಿ ನಡೆದಿದೆ. ಮೃತರನ್ನು ಎಲೆಕ್ಟ್ರೀಷಿಯನ್ ಕೆಲಸ ಮಾಡುತಿದ್ದ ಅಜಯ್ (21) ಎಂದು ಗುರುತಿಸಲಾಗಿದೆ.
ಇವರು ವಾಲಿಬಾಲ್ ಆಡಲೆಂದು ರವಿವಾರ ಅಪರಾಹ್ನ ಕೆ.ಸಿ.ರೋಡ್ಗೆ ತೆರಳಿದ್ದರು. ವಾಲಿಬಾಲ್ ಆಡಿದ ಬಳಿಕ 2:30ರ ಸುಮಾರಿಗೆ ಸ್ನೇಹಿತರೆಲ್ಲರೂ ಹೊಳೆಯ ದಂಡೆಯಲ್ಲಿ ಕುಳಿತಿದ್ದು, ಅಜಯ್ ತಾನು ಈಜಿಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವಾಗಿ ಹೇಳಿ ಹೊಳೆಗೆ ಇಳಿದಿದ್ದು, ಮಧ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟರು. ಬಳಿಕ ಸ್ಥಳೀಯರೊಬ್ಬರು 4 ಗಂಟೆ ಸುಮಾರಿಗೆ ಮೃತದೇಹವನ್ನು ಹೊರತೆಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





