ಮಣೂರಿನಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ

ಕೋಟ: ಮಣೂರಿನಲ್ಲಿ ಮೂರು ದಿನ ಜರಗಲಿರುವ ಕಿಶೋರ ಯಕ್ಷಗಾನ ಸಂಭ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಶಂಕರ್ ಶನಿವಾರ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಡಾ.ಪ್ರಭಾಕರ ತೋಳಾರ್, ಡೆನ್ನಿಸ್ ಬಾಂಜಿ, ನಿರಂಜನ್ ನಾಯ್ಕ್, ಯಕ್ಷ ಶಿಕ್ಷಣ ಟ್ರಸ್ಟ್‌ನ ವಿ.ಜಿ.ಶೆಟ್ಟಿ, ಎಚ್.ಎನ್.ಶೃಂಗೇಶ್ವರ, ನಾಗರಾಜ ಹೆಗಡೆ ಉಪಸ್ಥಿತರಿದ್ದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕರೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಬ್ರಹ್ಮಾವರ ವಂದಿಸಿದರು.
ಸಭೆಯ ಪೂರ್ವದಲ್ಲಿ ಕೋಡಿಕನ್ಯಾನ ಸೋಮ ಬಂಗೇರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ, ನವೀನ್ ಕೋಟ ನಿರ್ದೇಶನದಲ್ಲಿ ಗುರುದಕ್ಷಿಣೆ, ಸಭೆಯ ಬಳಿಕ ತೆಕ್ಕಟ್ಟೆ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳಿಂದ ಸ್ಕಂದ ನಿರ್ದೇಶನದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನಗಳು ಪ್ರದರ್ಶನಗೊಂಡವು.
Next Story





