ಉಡುಪಿ ಜಿಲ್ಲಾ ಮಟ್ಟದ ಚಿಣ್ಣರ ಹಬ್ಬ ‘ರೋಶನ್ ಸಿತಾರೆ’ ಉದ್ಘಾಟನೆ

ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆ ವತಿಯಿಂದ ಸಣ್ಣ ಮಕ್ಕಳಿಗಾಗಿ ರೋಶನ್ ಸಿತಾರೆ ಶೀಷಿಕೆ ಅಡಿ ಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ಹೂಡೆಯ ಸಾಲಿಹಾತ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಯೂಸುಫ್ ಕನ್ನಿ ಮಾತನಾಡಿ, ಪ್ರತಿಯೊಂದು ಮಗುವಿನ ಮೊದಲ ಪಾಠ ಶಾಲೆ ಆ ಮಗುವಿನ ತಾಯಿಯ ಮಡಿಲು ಆಗಿದೆ. ತಾಯಿಯಾದವಳು ತನ್ನ ಮಗುವಿನ ಇಹ ಮತ್ತು ಪರಲೋಕವನ್ನು ಬೆಳಗಿಸಲು ಆ ಮಗುವಿಗೆ ಉತ್ತಮ ಸಂಸ್ಕಾರವುಳ್ಳ ವಿದ್ಯೆಯನ್ನು ನೀಡಿ ಉತ್ತಮ ಮಾರ್ಗ ದರ್ಶಿಯಾಗಿ ಬೆಳೆಸಬೇಕು ಎಂದು ಹೇಳಿದರು.
ಕೆಮ್ಮಣ್ಣು ಗ್ರಾಪಂ ಮಾಜಿ ಅಧ್ಯಕ್ಷೆ ರಝೀಯ, ಹಾಲಿ ಸದಸ್ಯೆ ಮುಮ್ತಾಜ್ ಬಾನು, ಡಾ.ಶಾಹೆ ನವಾಜ್, ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾಧ್ಯಕ್ಷ ಡಾ.ಅಬ್ದುಲ್ ಅಝೀಝ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ, ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾಧ್ಯಕ್ಷ ಡಾ. ಅಬ್ದುಲ್ ಅಜೀಜ್, ಹೂಡೆ ಅಧ್ಯಕ್ಷ ಅಬ್ದುಲ್ ಕಾದಿರ್ ಹೂಡೆ, ಕಾರ್ಯ ಕ್ರಮದ ಸಂಚಾಲಕ ಝಿಯಾವುರ‌್ರಹ್ಮಾನ್, ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಮಹಿಳಾ ಸಂಚಾಲಕಿ ಕುಲ್ಸೂಮ್ ಅಬುಬಕ್ಕರ್, ಇಬ್ರಾಹೀಮ್ ಚೌಗುಲೆ ಉಪಸ್ಥಿತರಿದ್ದರು.
ಡಾ.ಅಬ್ದುಲ್ ಅಝೀಝ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಸೀನ್ ಮನ್ನ ಹಾಗು ಅನ್ವರ್ ಅಲಿ ಕಾಪು ಕರ್ಯಕ್ರಮ ನಿರೂಪಿಸಿದರು. ನಿಸಾರ್ ವಂದಿಸಿದರು. ಬಳಿಕ ಮಲ್ಪೆ, ಹೂಡೆ, ಗಂಗೊಳ್ಳಿ, ಕಾಪು, ಕಟಪಾಡಿ, ಕಾರ್ಕಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕ್ರೀಡಾಕೂಟದಲ್ಲಿ ಜಿಲ್ಲೆಯ ಶಿರೂರು ಬೈಂದೂರು, ಗಂಗೊಳ್ಳಿ, ಕುಂದಾಪುರ, ಕಂಡ್ಲೂರು, ಕಾರ್ಕಳ, ಕಾಪು, ಮಲ್ಪೆ, ಹೂಡೆ, ಕುಕ್ಕಿಕಟ್ಟೆ, ಕಟಪಾಡಿ ಹಾಗು ಇನ್ನಿತರ ಕಡೆಗಳಿಂದ ಸುಮಾರು 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.







