ಉಡುಪಿ : ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ

ಉಡುಪಿ, ಜ.4: ಮಹಿಳೆಯೊಬ್ಬರು ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವಂಚನೆ ಮೂಲಕ ವರ್ಗಾಯಿಸಿ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಜಿಬೆಟ್ಟುವಿನ ಶಾರದಾ(59) ಎಂಬವರು ಜ.2ರಂದು ರಾತ್ರಿ ಮನೆಯ ಲ್ಲಿರುವಾಗ ಅವರ ಬ್ಯಾಂಕ್ ಖಾತೆಯಿಂದ ವಿವಿಧ ಹಂತಗಳಲ್ಲಿ 60,000ರೂ. ಹಣ ಬೇರೆಯರ ಖಾತೆಗೆ ವರ್ಗಾವಣೆಯಾಗಿರುವುದಾಗಿ ದೂರಲಾಗಿದೆ.
Next Story





