ಬಲ್ಕೀಸ್ ಬಾನು ತೀರ್ಪು; ಮಹಿಳಾ ಸಮುದಾಯಕ್ಕೆ ಸಂದ ಜಯ: ವರೋನಿಕಾ

ಬಿಲ್ಕಿಸ್ ಬಾನು
ಉಡುಪಿ : ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರಕಾರದ ಆದೇಶವನ್ನು ರದ್ದು ಪಡಿಸಿದ ಸುಪ್ರಿಂ ಕೋರ್ಟ್ನ ತೀರ್ಪು ಇಡೀ ಮಹಿಳಾ ಸಮುದಾಯಕ್ಕೆ ಸಂದ ಜಯವಾಗಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.
ದೇಶದ ಹಲವು ಮೂಲೆಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೊಂದ ಮಹಿಳೆಯರು ನ್ಯಾಯ ಸಿಗದೆ ಸಮಸ್ಯೆ ಅನುಭವಿಸು ತ್ತಿರುವ ಸಂದರ್ಭದಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಅಂತಹ ಮಹಿಳೆಯರಿಗೆ ಅಶಾವಾದ ದಿಂದ ಬದುಕಲು ಪ್ರೇರೆ ಪಣೆ ನೀಡಿದಂತಾಗಿದೆ. ಸುಪ್ರೀಂ ಕೋರ್ಟ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇನ್ನೂ ನಂಬಿಕೆ ಉಳಿಸಿಕೊಳ್ಳಬಹುದು ಎಂಬ ಭಾವನೆ ಮೂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





