ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಡಾ.ಗಣೇಶ್ ಗಂಗೊಳ್ಳಿ

ಡಾ.ಗಣೇಶ್
ಉಡುಪಿ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಹಾಗೂ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಜಾನಪದ ಕಲಾವಿದ, ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ.
ಕನ್ನಡ ಜಾನಪದ ಪರಿಷತ್ ರಾಜ್ಯ ಸಮಿತಿಯ ನಿರ್ಣಯದಂತೆ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಉಡುಪಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಕಾರ್ಯಾಧ್ಯಕ್ಷರಾಗಿ ಉದಯಕುಮಾರ್ ಬಿ ಹೈಕಾಡಿ, ಖಜಾಂಚಿ ಯಾಗಿ ಸ್ಮಿತಾ ಎನ್.ಭಟ್ ಉಡುಪಿ, ಸಂಚಾಲಕರಾಗಿ ಭಾಸ್ಕರ್ ಗುಂಡಿಬೈಲು, ಜಂಟಿ ಕಾರ್ಯದರ್ಶಿಯಾಗಿ ಫಾರೂಕ್ ಚಂದ್ರನಗರ ಕಾಪು, ಮಾಧ್ಯಮ ಕಾರ್ಯದರ್ಶಿಯಾಗಿ ನರಸಿಂಹ ನಾಯಕ್ ಉಪ್ಪುಂದ ಬೈಂದೂರು, ಸಂಘಟನಾ ಕಾರ್ಯದರ್ಶಿಯಾಗಿ ಜಯರಾಂ ಪೆರ್ಡೂರು, ಸಮಿತಿ ಸದಸ್ಯರಾಗಿ ಸುನೀತಾ ಶೆಟ್ಟಿ ಕುಂದಾಪುರ, ರಮಣಿ ಬೈಂದೂರು, ವಸಂತಿ ಕಡಂಬಳ, ಅಶ್ವಿನಿ, ಚಂದ್ರಪಾಣ ಆಯ್ಕೆಯಾಗಿದ್ದಾರೆ.
Next Story





