ವಿದ್ಯಾರ್ಥಿಗಳ ಯಶಸ್ಸಿಗೆ ಸಂವಹನ ಕೌಶಲ್ಯಗಳು ಅತ್ಯಗತ್ಯ: ವಿಕ್ರಮ್‌ದೇವ್ ಪ್ರಭು

ಉಡುಪಿ, ಜ.10: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ವೃತ್ತಿಪರವಾಗಿ ಯಶಸ್ಸು ಸಾಧಿಸಲು ಸಂವಹನ ಕೌಶಲ್ಯಗಳು ಅತ್ಯಗತ್ಯ ಎಂದು ಮಣಿಪಾಲ ವಿಶ್ವವಿದ್ಯಾಲಯದ ಸಂಶೋಧಕರಾದ ವಿಕ್ರಮ್‌ದೇವ್ ಪ್ರಭು ಹೇಳಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಸಂವಹನ ಮತ್ತು ಕೌಶಲ್ಯ ಅಭಿವೃದ್ಧಿ ಪ್ರಮಾಣಪತ್ರ ಕೋರ್ಸ್‌ನ ಉದ್ಘಾಟನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಂವಹನ ಕೋರ್ಸ್‌ನ್ನು ಕಲಿಯುವುದರಿಂದ ತರಗತಿಯ ಚರ್ಚೆಗಳಲ್ಲಿ ಭಾಗವಹಿಸಲು ಪ್ರಸ್ತುತಿಗಳನ್ನು ನೀಡಲು ಮತ್ತು ನಿಯೋಜನೆಗಾಗಿ ವಿದ್ಯಾರ್ಥಿ ಗಳು ತಮ್ಮ ಆಲೋಚನೆಗಳನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ್ ಪ್ರೊ.ರಘುನಾಥ್ ಕೆ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾದ್ಯಾಪಕಿ ಪ್ರೀತಿ ಹರೀಶ್‌ರಾಜ್ ಕಾರ್ಯಕ್ರಮ ಸಂಯೋಜಿಸಿ ಅತಿಥಿಗಳನ್ನು ಸ್ವಾಗತಿಸಿದರು. ಶಾವ್ರರಿ ಶೆಟ್ಟಿ ವಂದಿಸಿ, ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.
Next Story





