ಶಾಲಾ ವಾಹನ ಢಿಕ್ಕಿ: ಅಂಗಡಿಗಳಿಗೆ ಹಾನಿ

ಉಡುಪಿ, ಜ.10: ಶಾಲಾ ವಾಹನವೊಂದು ಅಂಗಡಿಗೆ ಢಿಕ್ಕಿ ಹೊಡೆದ ಘಟನೆ ಜ.10ರಂದು ಸಂಜೆ ಸಂತೆಕಟ್ಟೆ ಸಮೀಪದ ಮಲ್ಪೆ ಕ್ರಾಸ್ ಬಳಿ ನಡೆದಿದೆ.
ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಶಾಲಾ ವಾಹನವು ಸಂಜೆ ಮಕ್ಕಳನ್ನು ಮನೆಗೆ ಬಿಡಲು ಹೋಗುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ವಾಹನವು ರಸ್ತೆ ಬದಿಯ ಅಂಗಡಿಗಳಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇದರಿಂದ ಮೆಡಿಕಲ್ ಶಾಪ್ ಸೇರಿದಂತೆ ಎರಡು ಅಂಗಡಿಗಳಿಗೆ ಹಾನಿ ಯಾಗಿವೆ. ವಾಹನದಲ್ಲಿದ್ದ ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





