ಕುಂದಾಪುರ: ಮೋದಿ ಸರಕಾರದ ಚಾಲಕರ ವಿರೋಧಿ ನೀತಿಗೆ ಪ್ರತಿಭಟನೆ

ಕುಂದಾಪುರ, ಜ.12: ಕೇಂದ್ರ ಒಕ್ಕೂಟ ಸರಕಾರವು ಇತ್ತೀಚೆಗೆ ಅಂಗೀಕರಿಸಿದ ಭಾರತೀಯ ನ್ಯಾಯ ಸಂಹಿತೆ 2023ರ ಅನ್ವಯ ಹಿಟ್ ಆ್ಯಂಡ್ ರನ್ ಪ್ರಕರಣವನ್ನು ಕ್ರಿಮಿನಲ್ ಕಾಯಿದೆ ಅಡಿ ತಂದು ಚಾಲಕರಿಗೆ 7 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿದಿಸುವ ಕಾನೂನನ್ನು ಹಾಗೂ ಚಾಲಕರಿಗೆ ಶಾಪವಾಗಿರುವ ಈ ಕಾಯಿದೆಯನ್ನು ಕೇಂದ್ರದ ಒಕ್ಕೂಟ ಸರಕಾರ ಕೂಡಲೆ ಹಿಂಪಡೆಯಬೇಕೆಂದು ಒತ್ತಾಯಿಸಿ ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ( ಸಿಐಟಿಯು) ಇಂದು ಕುಂದಾಪುರ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
ಸಭೆಯನ್ನುದ್ದೇಶಿಸಿ ಸಿಐಟಿಯು ತಾಲೂಕು ಸಂಚಾಲಕ ಹಾಗೂ ಸಂಘದ ಸಂಘಟನ ಕಾರ್ಯದರ್ಶಿ ಚಂದ್ರಶೇಖರ ವಿ. ಮಾತನಾಡಿದರು.
ಸಭೆಯಲ್ಲಿ ಸಂಘ ಅಧ್ಯಕ್ಷರಾದ ರಮೇಶ್ ವಿ., ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಉಪಾಧ್ಯಕ್ಷ ಎನ್ ಉಮೇಶ್, ರವೀಂದ್ರ ಶೆಟ್ಟಿ, ಕೃಷ್ಣ ಪೂಜಾರಿ, ಗೋವಿಂದ ಗುಡಾರ ಹಕ್ಲು, ಅರುಣ ಕುಮಾರ, ಜನಾರ್ದನ ಹಟ್ಟಿಯಂಗಡಿ, ಕೇಶವ ಪಾರಿಜಾತ, ಕೋಶಾಧಿಕಾರಿ ಸಂತೋಷ ಕಲ್ಲಾಗರ, ರವಿ ವಿ. ಎಂ ಭಾಗವಹಿಸಿದ್ದರು.







