ಮಣಿಪಾಲ: ನಕಲಿ ಆ್ಯಪ್ ಮೂಲಕ ಲಕ್ಷಾಂತರ ರೂ. ವಂಚನೆ

ಮಣಿಪಾಲ, ಜ.13: ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಟಾಸ್ಕ್ ನೀಡಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲದ ವಿದ್ಯಾರತ್ನ ನಗರದ ಜಾಸ್ಮಿ ಟಿ.ಕೆ.(34) ಎಂಬವರು ಸಾಮಾಜಿಕ ಜಾಲತಾಣದಲ್ಲಿ ಬಂದ ಆನ್‌ಲೈನ್ ಜಾಬ್ ಬಗ್ಗೆ ಒಪ್ಪಿಕೊಂಡಿದ್ದು, ಅದರಂತೆ ಆ್ಯಪ್ ಮೂಲಕ ಬಂದ ಲಿಂಕ್‌ನಲ್ಲಿ ಟಾಸ್ಕ್ ನೀಡಲಾಗಿತ್ತು. ಜ.8ರಂದು ಟೆಲಿಗ್ರಾಮ್ ಆಪ್ ಮೂಲಕ ಸಂಪರ್ಕಿಸಿ ಟ್ರೇಡಿಂಗ್ ವಿವರ ನೀಡಿದ್ದು, ಜಾಸ್ಮಿ ಜ.11ರಂದು ಒಟ್ಟು 1,88,000ರೂ. ಹಣವನ್ನು ಮಹೇಶ್ ಎಂಬಾತನ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ್ದರು. ಆರೋಪಿಯು ನಕಲಿ ಅಪ್ ಮೂಲಕ ಜಾಸ್ಮಿ ಅವರಿಂದ ಹಣ ವರ್ಗಾ ವಣೆ ಮಾಡಿಸಿ ಹಣ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





