ತೆಕ್ಕಟ್ಟೆ: ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಸಾಧನಾ ಸಮಾವೇಶ

ಕುಂದಾಪುರ, ಜ.15: ಕುಂದಾಪುರ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ -2 ತಾಲೂಕು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ತೆಕ್ಕಟ್ಟೆ ವಲಯದ ಸಾಧನಾ ಸಮಾ ವೇಶವು ದೇಲಟ್ಟು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, ಗ್ರಾಮಾಭಿವೃದ್ಧಿ ಯೋಜನೆ ಗ್ರಾಮ ಮಟ್ಟದಲ್ಲಿ ಅನುಷ್ಥಾನ ಆದನಂತರದ ಸಾಮಾಜಿಕವಾಗಿ ಆರ್ಥಿಕವಾಗಿ ಸಾರ್ವಜನಿಕರ ಬದಲಾವಣೆ ಜನರ ಆರ್ಥಿಕ ಸಬಲೀಕರಣಕ್ಕೆ ಮೂಲವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಅದ್ಯಕ್ಷ ನವೀನ್‌ಚಂದ್ರ ಶೆಟ್ಟಿ ರಟ್ಟಾಡಿ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಂಡ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕುಂದಾಪುರ-2 ತಾಲೂಕಿನ ಯೋಜನಾಧಿ ಕಾರಿ ನಾರಾಯಣ ಪಾಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡರಾದ ಶಿವರಾಮ್ ಶೆಟ್ಟಿ, ಬಿ.ಕರುಣಾಕರ ಶೆಟ್ಟಿ ಬೇಳೂರು, ದೇಲಟ್ಟು ಶ್ರೀಮಹಾ ಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ತೆಕ್ಕಟ್ಟೆ ವಲಯಾಧ್ಯಕ್ಷ ಸುಕುಮಾರ ಶೆಟ್ಟಿ ದೇಲಟ್ಟು, ಬೇಳೂರು ಗ್ರಾಪಂ ಉಪಾಧ್ಯಕ್ಷ ಉಷಾ ನಿತ್ಯಾನಂದ ಕೊಠಾರಿ ಮಾತನಾಡಿದರು.
ವಲಯದ ಮೇಲ್ವಿಚಾರಕ ರಾಧಿಕಾ ವರದಿ ಮಂಡಿಸಿದರು. ಕುಂಭಾಶಿ ಸೇವಾ ಪ್ರತಿನಿಧಿ ಪ್ರಭಾವತಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ರಾಧಿಕಾ ಕಾರ್ಯ ಕ್ರಮ ನಿರೂಪಿಸಿದರು. ಸ್ಥಳೀಯ ಸೇವಾ ಪ್ರತಿನಿಧಿ ಉಷಾ ವಂದಿಸಿದರು.







