ಉಡುಪಿ ನಿತ್ಯಾನಂದ ಮಂದಿರದಲ್ಲಿ ಭಜನಾ ಕಾರ್ಯಕ್ರಮ

ಉಡುಪಿ: ಉಡುಪಿ ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪ್ರಥಮ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಶ್ರೀಸ್ವಾಮಿ ದೇವರಿಗೆ ವಿಶೇಷ ಹೂಗಳಿಂದ ಅಲಂಕಾರ ಭಜನಾ ಕಾರ್ಯಕ್ರಮ ಇಂದು ಜರಗಿತು.
ಕಾರ್ಯಕ್ರಮವನ್ನು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಉದ್ಘಾಟಿಸಿದರು. ಉಡುಪಿ ಹರ್ಷದ ಸೂರ್ಯ ಪ್ರಕಾಶ ತಂಡದವರಿಂದ ಭಜನೆ ಆರಂಭಗೊಂಡು ವಿವಿಧ ತಂಡಗಳಿಂದ ನಿರತಂತರ ಭಜನಾ ಕಾರ್ಯಕ್ರಮ ನಡೆಯಿತು. ಸ್ವಾಮಿಗೆ ವಿಶೇಷ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆೆಯಿತು.
ನಿತ್ಯಾನಂದ ವಿದ್ಯಾಕೇಂದ್ರದ ಅಧ್ಯಕ್ಷ ದಿವಾಕರ ಶೆಟ್ಟಿ, ನವೀನ ಶೆಟ್ಟಿ ತೋನ್ಸೆ, ಉದಯಕುಮಾರ್ ಶೆಟ್ಟಿ, ಈಶ್ವರ ಚಿಟ್ಪಾಡಿ, ನಟರಾಜ್ ಹೆಗ್ಡೆ ಪಳ್ಳಿ, ಸುರೇಶ ಕುಮಾರ್, ಶ್ರೀಕಾಂತ್ ಶೆಟ್ಟಿ, ಸುರೇಂದ್ರ ಶೆಟ್ಟಿ, ವಿಶ್ವನಾಥ್ ಸನಿಲ್ ಕಡೆಕಾರ್, ದೀಪಕ್ ಪ್ರಭು, ಸುನಂದಾ, ಶಾರದಾ ಮೊದಲಾದವರು ಉಪಸ್ಥಿತರಿದ್ದರು.
Next Story





