ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

ಹಿರಿಯಡ್ಕ: ಸರಿಯಾದ ಕೆಲಸ ಇಲ್ಲದ ಚಿಂತೆಯಲ್ಲಿ ಮನನೊಂದ ಕಣಜಾರು ಗ್ರಾಮದ ಕಿಶೋರ್(43) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ಜ.14ರಂದು ಮಧ್ಯಾಹ್ನ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ವೈಯಕ್ತಿಕ ವಿಚಾರದಲ್ಲಿ ಮನನೊಂದ ವರಂಗ ಗ್ರಾಮದ ಮುನಿಯಾಲು ನೀರಪಲ್ಕೆ ನಿವಾಸಿ ಪುಟ್ಟು(63) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ಜ.14ರಂದು ಸಂಜೆ ಮನೆಯ ಹತ್ತಿರದ ಹಾಡಿಯಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





