ಪುತ್ತಿಗೆ ಸ್ವಾಮೀಜಿಯ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನೆ

ಉಡುಪಿ, ಜ.16: ಈ ಬಾರಿ ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಬದುಕಿನ ಸ್ಮರಣೀಯ ಛಾಯಾಚಿತ್ರ ಗಳ ಪ್ರದರ್ಶನ ‘ಜೀವನ ಚಿತ್ರ’ವನ್ನು ಉಡುಪಿ ಕುಂಜಿಬೆಟ್ಟುವಿನ ಇನಾಯತ್ ಆರ್ಟ್ ಗ್ಯಾಲರಿ ಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿದ ಪುತ್ರಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಈ ಪ್ರದರ್ಶನದ ಮೂಲಕ ನನ್ನ ಜೀವನನ್ನು ಸ್ಥಿರಗೊಳಿಸಿದ್ದಾರೆ. ಹಳೆ ಫೋಟೋ ಗಳನ್ನು ಸಂಗ್ರಹಿಸಿ ರಕ್ಷಣೆ ಮಾಡುವುದು ಬಹಳ ಕಷ್ಟದ ಕೆಲಸ. ವಿಶೇಷ ಶ್ರಧ್ಧೆ,. ಆಸಕ್ತಿ ಇದ್ದರೆ ಮಾತ್ರ ಅದು ಸಾಧ್ಯ ವಾಗುತ್ತದೆ. ಆ ಕೆಲಸವನ್ನು ಇಲ್ಲಿ ಮಾಡಿರುವುದು ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಇನಾಯತ್ ಆರ್ಟ್ ಗ್ಯಾಲರಿಯ ಸ್ಥಾಪಕ, ಕಲಾವಿದ ಲಿಯಕತ್ ಅಲಿ, ವ್ಯಂಗ್ಯ ಚಿತ್ರಗಾರ ಜೀವನ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





