‘ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ವಿನ್ಯಾಸ’ ತಾಂತ್ರಿಕ ಕಾರ್ಯಾಗಾರ

ಶಿರ್ವ, ಜ.20: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗವು ಐಎಸ್‌ಟಿಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಓಪನ್ ಸೋರ್ಸ್ ಪರಿಕರಗಳನ್ನು ಬಳಸಿಕೊಂಡು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ವಿನ್ಯಾಸ ಎಂಬ ವಿಷಯದ ಕುರಿತು ತಾಂತ್ರಿಕ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಇನ್ವಿಹಬ್ ಟೆಕ್ನೋ ಸೋಲ್ಯೂಷನ್ಸ್‌ನ ನಿರ್ದೇಶಕ ಡಾ.ಶಶಾಂಕ್ ಎಂ ಗೌಡ ಮಾತ ನಾಡಿ, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳನ್ನು ಓಪನ್ ಸೋರ್ಸ್ ಪರಿಕರಗಳನ್ನು ಬಳಸಿಕೊಂಡು ಹೇಗೆ ವಿನ್ಯಾಸಗೊಳಿಸ ಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಐಎಸ್‌ಟಿಇ ಘಟಕದ ಸಂಯೋಜಕ ಚಂದನಾ ಕಾರ್ಯಕ್ರಮ ವನ್ನು ಸಂಯೋಜಿಸಿದರು. ವಿದ್ಯಾರ್ಥಿನಿ ಅನನ್ಯ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ.ಗುರುಪ್ರಸಾದ್, ಸಂಸ್ಥೆಯ ಐಎಸ್‌ಟಿಇ ಘಟಕದ ಸಂಯೋಜಕ ಶಶಿಕಲಾ ಉಪಸ್ಥಿತರಿದ್ದರು.





