ಕಾರ್ಕಳ: ಮೂಕಾಂಬಿಕಾ ದೇವಸ್ಥಾನದ ನೌಕರ ನಾಪತ್ತೆ

ಕಾರ್ಕಳ, ಜ.22: ಕಾರ್ಕಳ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನದಲ್ಲಿ ಸ್ವಚ್ಚತಾ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡದ ಮೂಲದ ವೆಂಕಟೇಶ ದಾಸ(22) ಎಂಬವರು ಜ.19ರಂದು ರಾತ್ರಿಯಿಂದ ನಾಪತ್ತೆಯಾಗಿದ್ದಾರೆ.
ದೇವಸ್ಥಾನದ ಕೋಣೆಯಲ್ಲಿ ಮಲಗಿದ್ದ ಇವರು ಬಟ್ಟೆಗಳನ್ನು ತೆಗೆದುಕೊಂಡು ಯಾರಲ್ಲಿಯೂ ಹೇಳದೆ ಅವರ ಸ್ವಂತ ಊರಿಗೂ ಹೋಗದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





