ರಾಜ್ಯಮಟ್ಟದ ದಫ್ ಸ್ಪರ್ಧೆ: ಕಾಪು 'ಪೊಲಿಪು ಖುವ್ವತುಲ್ ಇಸ್ಲಾಮ್'ಗೆ ಚಾಂಪಿಯನ್ ಪ್ರಶಸ್ತಿ

ಕಾಪು, ಜ.27: ಹಳೆಯಂಗಡಿ ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಲಿಯಾವುಲ್ ಇಸ್ಲಾಮ್ ದಫ್ ಕಮಿಟಿಯ 41ನೇ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ದಫ್ ಸ್ಪರ್ಧೆಯು ಶುಕ್ರವಾರ ರಾತ್ರಿ ಬೊಳ್ಳೂರು ಜುಮಾ ಮಸೀದಿ ವಠಾರದಲ್ಲಿ ಜರುಗಿತು.
ರಾಜ್ಯದ 12 ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕಾಪು ಪೊಲಿಪು ಖುವ್ವತುಲ್ ಇಸ್ಲಾಂ ದಫ್ ಸಮಿತಿ ಚಾಂಪಿಯನ್ ಆಗಿ ಮೂಡಿಬಂತು. ದ್ವಿತೀಯ ಸ್ಥಾನವನ್ನು ಕೃಷ್ಣಾಪುರ ಲಜಿನತುಲ್ ಅನ್ಸಾರಿಯಾ ತಂಡ ಮತ್ತು ತೃತೀಯ ಸ್ಥಾನವನ್ನು ಶಿರ್ವ ಮಂಚಕಲ್ ಅಲ್-ಅಮೀನ್ ದಫ್ ಕಮಿಟಿ ಪಡೆದುಕೊಂಡಿತು.
Next Story





