ಕೋಳಿ ಅಂಕ: ನಾಲ್ವರ ಬಂಧನ

ಬೈಂದೂರು, ಜ.28: ಕಾಸನಾಡಿ ಎಂಬಲ್ಲಿರುವ ಹಾಡಿಯಲ್ಲಿ ಜ.27ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ನಾರಾಯಣ, ಕರ್ಣ, ಮಧುಕರ, ಸುಬ್ಬ ಬಂಧಿತ ಆರೋಪಿಗಳು. ದಾಳಿ ವೇಳೆ ಸಚಿನ್, ಮಹಾಬಲ, ಚಂದ್ರ, ಶೇಖರ ಹಾಗೂ ಇತರರು ಓಡಿಹೋಗಿ ರುವುದಾಗಿ ತಿಳಿದುಬಂದಿದೆ. ಬಂಧಿತರಿಂದ ಕೋಳಿ ಅಂಕಕ್ಕೆ ಬಳಸಿದ 4 ಕೊಳಿಗಳನ್ನು, 2 ಕೋಳಿ ಬಾಳು ಹಾಗೂ 1540ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





