ತೋನ್ಸೆ ಖದೀಮೀ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ಕಾದರ್, ಗೌರವಾಧ್ಯಕ್ಷರಾಗಿ ಉಮ್ಮರ್ ಸಾಹೇಬ್

ಉಡುಪಿ, ಜ.28: ತೋನ್ಸೆ ಖದೀಮೀ ಜಾಮಿಯಾ ಮಸೀದಿಯ ನೂತನ ಅಧ್ಯಕ್ಷರಾಗಿ ಹವಲ್ದಾರ್ ಅಬ್ದುಲ್ ಕಾದರ್ ಹಾಗೂ ಗೌರವಾಧ್ಯಕ್ಷರಾಗಿ ಕುದೂರ್ ಉಮ್ಮರ್ ಸಾಹೇಬ್ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಮಸೀದಿ ಆಡಳಿತ ಮಂಡಳಿಯ ಮಹಾಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಟಿ.ಎಂ.ರೆಹಮತುಲ್ಲಾ, ಕಾರ್ಯದರ್ಶಿಯಾಗಿ ಮುಶ್ತಾಕ್ ಕುದುರ್, ಜೊತೆ ಕಾರ್ಯ ದರ್ಶಿಯಾಗಿ ಕೆ.ಅಬೂಬಕ್ಕರ್ ಹಸನ್, ಖಜಾಂಚಿಯಾಗಿ ಅಕ್ಬರ್ ಅಮೀನ್ ಶೇಖ್, ಗೌರವ ಸಲಹೆಗಾರರಾಗಿ ಮುಹಮ್ಮದ್ ಹುಸೈನ್ ಮಾಸ್ಚರ್ ಮತ್ತು 18 ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
Next Story





