ಕುಂದಾಪುರ: ಸೌಹಾರ್ದತೆ ಸಂದೇಶ ಸಾರಿದ ಮಾನವ ಸರಪಳಿ

ಕುಂದಾಪುರ: ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಇಂದು ಸೌಹಾರ್ದ ಕರ್ನಾಟಕದ ನೇತೃತ್ವದಲ್ಲಿ ಸಮಾನ ಮನಸ್ಕ ವಿವಿಧ ಸಂಘನೆ ಗಳ ಆಶ್ರಯದಲ್ಲಿ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಬೃಹತ್ ಮಾನವ ಸರಪಳಿ ಯನ್ನು ರಚಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಲಾಯಿತು.
ಬಳಿಕ ತಾ.ಪಂ ಎದುರು ನಡೆದ ಶಾಂತಿ ಸಂದೇಶ ಸಭೆಯಲ್ಲಿ ಮಾತನಾಡಿದ ಚಿಂತಕ ಡಾ.ದಿನೇಶ್ ಹೆಗ್ಡೆ, ಗಾಂಧೀ ಹುತಾ ತ್ಮರ ದಿನದಂದು ಮಾನವ ಸರಪಳಿ ರಚಿಸುವ ಮೂಲಕ ಶಾಂತಿ, ಸಮನ್ವಯತೆ, ಸಹಬಾಳ್ವೆಗೆ ಕರೆಕೊಡುವ ಚಳುವಳಿ ಇದಾಗಿದೆ. ಸಾವಿರಾರು ವರ್ಷಗಳ ಸಹಬಾಳ್ವೆಯಿರುವ ದೇಶದಲ್ಲಿ ನಾವಿದ್ದೇವೆ. ಇತಿಹಾಸದಲ್ಲಿ ಹಲವು ಘಟನೆಗಳು ನಡೆದಿದ್ದು ಅದು ಪ್ರಭುತ್ವದ ಒಳಗಿನ ಅಧಿಕಾರದ ಸಂಘರ್ಷ ಹೊರತು ಜನಸಾಮಾನ್ಯರದ್ದಲ್ಲ. ಜನರ ಮಧ್ಯೆ ಸಹಬಾಳ್ವೆ ಇಂದಿಗೂ ಇದೆ ಎಂದರು.
ಸತ್ಯಶೋಧಕರಾಗಿ, ಅಹಿಂಸಾ ಮಾರ್ಗದಲ್ಲಿ ತೊಡಗಿಸಿಕೊಂಡ ವ್ಯಕ್ತಿತ್ವ ಗಾಂಧಿವರದ್ದು. ರಾಜ್ಯ, ಸರಕಾರ ಪ್ರಧಾನವಲ್ಲ ಬದಲಾಗಿ ಜನರ ಪರವಾಗಿರ ಬೇಕು ಎಂಬುದನ್ನು ಪ್ರತಿಪಾದಿಸಿದರು. ಶೋಷಣೆ ಮಾಡುವ, ಜನವಿರೋಧಿ ಯಾದ ಕಾನೂ ನನ್ನು ವಿರೋಧಿಸಿದ ಅವರ ತತ್ವ ಇಂದಿಗೂ ಒಪ್ಪಬೇಕಿದೆ. ಅಂಬೇಡ್ಕರ್ ಅವರ ಜ್ಞಾನವನ್ನು ಗಾಂಧಿ ಮೆಚ್ಚಿಕೊಂಡಿದ್ದು ಇಬ್ಬರ ವಿಚಾರಧಾರೆ ಗಳಿಗೆ ಸಾಮ್ಯತೆಯಿತ್ತು ಎಂದು ಅವರು ತಿಳಿಸಿದರು.
ಸಹಬಾಳ್ವೆ ಕುಂದಾಪುರದ ರಾಮಕೃಷ್ಣ ಹೇರ್ಳೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕುಂದಾಪುರ ತಾಲೂಕು ಘಟಕದ ದಸ್ತಗಿರಿ ಸಾಹೇಬ್ ಕಂಡ್ಲೂರು, ರಿಯಾಝ್ ಕೋಡಿ, ದಸಂಸ ಮುಖಂಡರಾದ ವಾಸುದೇವ ಮುದೂರು, ಟಿ.ಮಂಜುನಾಥ ಗಿಳಿಯಾರು, ದಸಂಸ ಭೀಮಘರ್ಜನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯಕುಮಾರ್ ತಲ್ಲೂರು, ವಿಜಯ ಕೆ.ಎಸ್., ಸಮುದಾಯ ಕುಂದಾಪುರದ ಬಾಲಕೃಷ್ಣ ಕೆ.ಎಂ., ಕ್ಯಾಥೋಲಿಕ್ ಸಭಾ ಕುಂದಾಪುರ ವಲಯದ ವಿಲ್ಸನ್ ಅಲ್ಮೇಡಾ, ಸಿಐಟಿಯು ಕುಂದಾಪುರದ ಎಚ್. ನರಸಿಂಹ, ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್, ಡಿವೈಎಫ್‌ಐ ಸಂಘಟನೆಯ ರಾಜಾ ಬಿ.ಟಿ.ಆರ್., ಮಾನವ ಬಂಧುತ್ವ ವೇದಿಕೆಯ ಅಶೋಕ್ ಸುವರ್ಣ, ಕರ್ನಾಟಕ ಮುಸ್ಲೀಂ ಜಮಾತೆಯ ಮಹಮ್ಮದ್ ರಫಿಕ್ ಗಂಗೊಳ್ಳಿ, ದಲಿತ ಹಕ್ಕುಗಳ ಸಮಿತಿ ಕುಂದಾಪುರದ ರವಿ ವಿ.ಎಂ. ಮೊದಲಾದವರು ಉಪಸ್ಥಿತರಿದ್ದರು.
ಸೌಹಾರ್ದ ಕರ್ನಾಟಕದ ಸಂಚಾಲಕ ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ವಂದಿಸಿದರು. ಇದೇ ಸಂದರ್ಭ ತ್ರಾಸಿ, ಹೆಮ್ಮಾಡಿ, ತಲ್ಲೂರು, ಸಂಗಮ್, ಕುಂದಾಪುರ ಶಾಸ್ತ್ರೀ ವೃತ್ತ ಬಳಿ ಸರ್ವೀಸ್ ರಸ್ತೆ, ಬಸ್ರೂರು ಮೂರುಕೈ, ಕೋಟೇಶ್ವರದಲ್ಲೂ ಮಾನವ ಸರಪಳಿ ನಡೆಯಿತು.







