ಉಡುಪಿ: ಆಟೋ ರಿಕ್ಷಾಗಳಿಗೆ ಕಲರ್ ಕೋಡಿಂಗ್ ವಲಯ ಸ್ಟಿಕರ್ ಅಳವಡಿಕೆಗೆ ಕಡ್ಡಾಯ

ಉಡುಪಿ: ಉಡುಪಿ ತಾಲೂಕು ವಲಯ-01 ರ ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳು ನಗರದ ಯಾವುದೇ ಆಟೋರಿಕ್ಷಾ ನಿಲ್ದಾಣ ದಲ್ಲಿ ನಿಲುಗಡೆ ಮಾಡಬಹುದಾಗಿದೆ.
ಆದರೆ ಕೆಲವು ಆಟೋರಿಕ್ಷಾ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡದೇ ದಬ್ಬಾಳಿಕೆ ಮಾಡುತ್ತಿರುವುದಾಗಿ ಸಾಕಷ್ಟು ದೂರು ಗಳು ಪ್ರಾಧಿಕಾರಕ್ಕೆ ಬಂದಿದ್ದು, ಉಡುಪಿ ತಾಲೂಕು ವಲಯ-೦೧ರ ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳನ್ನು ನಗರದ ಯಾವುದೇ ಆಟೋರಿಕ್ಷಾ ನಿಲ್ದಾಣದಲ್ಲಿ ನಿಲುಗಡೆ ಮಾಡಲು ತೊಂದರೆ ನೀಡಬಾರದು.
ಈಗಾಗಲೇ ಜಾರಿಯಲ್ಲಿರುವಂತೆ ಎಲ್ಲಾ ಆಟೋ ರಿಕ್ಷಾಗಳಿಗೆ ಕಲರ್ ಕೋಡಿಂಗ್ ವಲಯ ಸ್ಟಿಕರ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಸಂಚರಿಸಲು ಎಲ್ಲಾ ಆಟೋರಿಕ್ಷಾ ಚಾಲಕರು ಕ್ರಮವಹಿಸಬೇಕು. ತಪ್ಪಿದಲ್ಲಿ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





