ಮಠದಬೆಟ್ಟು ಪರಿಸರದಲ್ಲಿ ಕಸದ ರಾಶಿ: ಸೂಕ್ತ ಕ್ರಮಕ್ಕೆ ಆಗ್ರಹ

ಉಡುಪಿ: ಉಡುಪಿ ನಗರಸಭೆಯ ವ್ಯಾಪ್ತಿಯ ಹೃದಯ ಭಾಗದ ಮಠದಬೆಟ್ಟುವಿಗೆ ಹೋಗುವ ದಾರಿಯಲ್ಲಿಯೇ ಕಸದ ರಾಶಿ ಗಳು ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆ ಬದಿ ಗುಪ್ಪೇ ಹಾಕಿ ವರಾನುಗಟ್ಟನೆ ಈ ಭಾಗದಲ್ಲಿ ಕೃತಕ ಕಸದ ರಾಶಿ ಸೃಷ್ಟಿಸಲಾಗುತ್ತಿದ್ದು, ವಾಹನದಲ್ಲಿ ಸಂಚರಿಸು ವರು ಈ ಕಸದ ರಾಶಿಯನ್ನು ಕಂಡು ಹಸಿ ಮತ್ತು ಒಣಕಸವನ್ನು ಅಲ್ಲಿಯೇ ಅದರ ಮೇಲೆ ಎಸೆದು ಹೋಗುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಇಲ್ಲಿ ಎಸೆಯಲಾದ ಕಸವನ್ನು ತೆರವುಗೊಳಿಸಬೇಕು ಮತ್ತು ಮುಂದೆ ಈ ವಠಾರವನ್ನು ಸ್ವಚ್ಛತೆಯಿಂದ ಇರಿಸುವ ಕಾರ್ಯ ಮಾಡ ಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
Next Story





