ದಿವ್ಯಾ ಕುಮಾರಿಗೆ ಪಿಎಚ್‌ಡಿ ಪದವಿ ಪ್ರದಾನ

ಉಡುಪಿ, ಜ.31: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಮಣಿಪಾಲದ ಮಾಧವ ಕೃಪಾ ಶಾಲೆಯ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯಾ ಕುಮಾರಿ, ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥೆ ಡಾ.ರೀನಾ ಕುಮಾರಿ ಪಿ.ಡಿ, ಮಾರ್ಗದರ್ಶನದಲ್ಲಿ ಮಂಡಿಸಿದ ‘ಕಂಪೇರಿಟೀವ್ ಸ್ಟಡಿ ಆಫ್ ಕೋರೋಶನ್ ಇನ್ಹಿಬೀಶನ್ ಆಫ್ ಅಲ್ಯುಮಿನಿಯಂ ಆ್ಯಂಡ್ ಅಲ್ಯುಮಿನಿಯಂ ಅಲಾಯ್ 6063 ಇನ್ ಅಸಿಡಿಕ್ ಮಿಡಿಯಂ ಬೈ ಸಂಮ್ ಇಕೋ ಫ್ರೆಂಡ್ಲಿ ಇನ್ಹಿಬೀಟರ್ಸ್’ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
Next Story





