ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಬೈಂದೂರು: ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುತ್ತಿದ್ದ ವೇಳೆ ಅಸ್ವಸ್ಥ ಗೊಂಡು ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರು ಮೃತಪಟ್ಟ ಘಟನೆ ಜ.31ರಂದು ಬೆಳಗ್ಗೆ ಶಿರೂರು ಅಳ್ವೆಗದ್ದೆ ಎಂಬಲ್ಲಿ ನಡೆದಿದೆ.
ಮೃತರನ್ನು ಶಿರೂರಿನ ವೆಂಕಟರಮಣ(65) ಎಂದು ಗುರುತಿಸಲಾಗಿದೆ. ಇವರು ಪಾತಿ ದೋಣಿಯಲ್ಲಿ ಸಮುದ್ರಕ್ಕೆ ಮೀನುಗಾ ರಿಕೆಗೆ ತೆರೆಳಿದ್ದು ಮೀನು ಗಾರಿಕೆ ಮುಗಿಸಿ ವಾಪಾಸು ದಡಕ್ಕೆ ಬರುತ್ತಿದ್ದಾಗ 20 ಮೀಟರ್ ಅಂತರದಲ್ಲಿ ಅಸ್ವಸ್ಥಗೊಂಡು ಸಮುದ್ರಕ್ಕೆ ಬಿದ್ದರೆನ್ನಲಾಗಿದೆ.
ಕೂಡಲೇ ಇವರನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಅವರು ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





