ಕೊಟ್ಟಿಗೆಗೆ ನುಗ್ಗಿ ಮೂರು ದನ ಕಳವು: ಪ್ರಕರಣ ದಾಖಲು

ಬೈಂದೂರು, ಫೆ.3: ಮನೆಯೊಂದರ ಕೊಟ್ಟಿಗೆಗೆ ನುಗ್ಗಿ ಮೂರು ದನಗಳನ್ನು ಕಳವು ಮಾಡಿರುವ ಘಟನೆ ಫೆ.3ರಂದು ಬೆಳಗಿನ ಜಾವ ಯಡ್ತರೆ ಎಂಬಲ್ಲಿ ನಡೆದಿದೆ.
ಸತೀಶ್ ಎಂಬವರ ಮನೆಯ ಕೊಟ್ಟಿಗೆಗೆ ನುಗ್ಗಿದ ನಾಲ್ಕೈದು ಜನರ ತಂಡ ತಲವಾರು ಝಳಪಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಸತೀಶ್ ಹೆದರಿ ಮನೆಯ ಒಳಗಡೆ ಹೋಗಿ ಬಾಗಿಲು ಹಾಕಿ ಮಲಗಿಕೊಂಡಿದ್ದರು. ಬಳಿಕ ತಂಡ ಸತೀಶ್ ಹಾಗೂ ಭರತ್ ಅವರ ಕೊಟ್ಟಿಗೆಯಲ್ಲಿದ್ದ ಒಟ್ಟು ಮೂರು ದನಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





