ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ: ವಿದ್ಯಾರ್ಥಿನಿ ಆರಾಧ್ಯಗೆ ಪ್ರಥಮ ಸ್ಥಾನ

ಕುಂದಾಪುರ: ತಮಿಳುನಾಡಿ ಕೊಯಮತ್ತೂರಿನಲ್ಲಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ವತಿಯಿಂದ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಆರ್. ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.
ಈಕೆ ಅರಾಟೆ ರಾಘವೇಂದ್ರ ಪೂಜಾರಿ ಮತ್ತು ಯಶೋದಾ ದಂಪತಿಯ ಪುತ್ರಿ. ಈಕೆಗೆ ಪ್ರಸನ್ನ ಕೆ.ಬಿ., ಸುನೀತಾ ಹಾಗೂ ಮಹಾಲಕ್ಷ್ಮೀ ಇವರು ತರಬೇತಿ ನೀಡಿದ್ದರು.
ಮಿಂಚಿದ ಕುಂದಾಪುರ ವಿಭಾಗ: ಕೊಯಮುತ್ತೂರಿನಲ್ಲಿ ನಡೆದ 19ನೇ ರಾಷ್ಟ್ರಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯಲ್ಲಿ ಕುಂದಾಪುರ ವಿಭಾಗದಿಂದ ಸ್ಪರ್ಧಿಸಿದ್ದ 59 ವಿದ್ಯಾರ್ಥಿಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಚಾಂಪಿ ಯನ್, 12 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 21 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 11 ವಿದ್ಯಾರ್ಥಿಗಳು ತೃತೀಯ ಸ್ಥಾನ, 7 ವಿದ್ಯಾರ್ಥಿಗಳು ನಾಲ್ಕನೇ ಸ್ಥಾನ ಹಾಗೂ ನಾಲ್ವರು ವಿದ್ಯಾರ್ಥಿಗಳು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಅರಾಟೆಯ ರೇಷ್ಮಾ ಮತ್ತು ರಾಜೇಶ್ ಅವರ ಪುತ್ರ ಲಕ್ಷ ರಾಜೇಶ್, ಪಡುಕೋಣೆ ಸಂದೀಪ್ ಲೆವಿಸ್ ಮತ್ತು ಫಿಲೋಮ್ ರೇಷ್ಮಾ ಅವರ ಪುತ್ರಿ ರೇಹನಾ ಸಾಲೋಮೀ, ಕೊಡ್ಲಾಡಿ ವಾರಿಜಕ್ಷಿ ಅವರ ಪುತ್ರ ಸ್ಕಂದ ಶೆಟ್ಟಿ ಮತ್ತು ಕೊಡ್ಲಾಡಿ ಪ್ರಮೀಳಾ ಮತ್ತು ನಾರಾಯಣ ಅವರ ಪುತ್ರಿ ನಮನ ಎನ್. ಚಾಂಪಿಯನ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.







