ಕುಕ್ಕೆಹಳ್ಳಿ: ಅಭಿವೃದ್ಧಿಗೊಂಡ ಮರಾಠಿ ಗದ್ದುಗೆ ರಸ್ತೆ ಉದ್ಘಾಟನೆ

ಉಡುಪಿ, ಫೆ.4: 25 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಗೊಂಡ ಕಾಪು ವಿಧಾನಸಭಾ ಕ್ಷೇತ್ರದ ಕುಕ್ಕೆಹಳ್ಳಿ ಗ್ರಾಮ ಪಂಚಾ ಯತ್ ವ್ಯಾಪ್ತಿಯ ಮರಾಠಿ ಗದ್ದುಗೆ ರಸ್ತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ಉದ್ಘಾಟಿಸಿದರು.
ರಸ್ತೆಯ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿತ್ತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುರಂದರ ಕೋಟ್ಯಾನ್ ಉಪಸ್ಥಿತರಿದ್ದರು.
ಗ್ರಾಪಂ ಸದಸ್ಯರಾದ ಸುನಿತಾ ನಾಯ್ಕ್, ಉಷಾ, ಹರೀಶ್ ನಾಯ್ಕ್, ಶಂಕರ್ ಸಾಲಿಯಾನ್, ಜಯಾನಂದ ನಾಯ್ಕ್, ಪೆರ್ಡೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಿಲ್ಪಾ, ಪಕ್ಷದ ಹಿರಿಯರಾದ ಪ್ರಕಾಶ್ ಹೆಬ್ಬಾರ್, ಹರಿಜೀವನ್ ಹೆಗ್ಡೆ, ಅರವಿಂದ ಆಚಾರ್ಯ ಹಾಗೂ ಬೂತ್ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story







