ಸಂತೆಕಟ್ಟೆ: ಬಿಲ್ಲವರ ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಕ್ರೀಡೆ ಸಮಾಜದ ಯುವ ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತದೆ. ಯುವಜನರ ಭಾವನೆ, ಅಭಿರುಚಿಗೆ ಸರಿಯಾದ ಕ್ರೀಡೆಯನ್ನೆ ಆಯೋಜನೆ ಮಾಡಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಸಂತೆಕಟ್ಟೆ -ಕಲ್ಯಾಣಪುರ ಬಿಲ್ಲವರ ಸೇವಾ ಸಂಘದ ನೇತೃತ್ವದಲ್ಲಿ ನೇಜಾರು ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಲಾದ ಸ್ಥಳೀಯ ಬಿಲ್ಲವ ಸಂಘಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡಾಕೂಟಕ್ಕೆ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಶೇಕರ ಗುಜ್ಜರ ಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ನಾಗರಾಜ ಕುಂದರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಉದ್ಯಮಿ ಸುಗುಣ ಕುಮಾರ್, ಮೂಡುಕುದ್ರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಜತ್ತನ್, ಸಂತೆಕಟ್ಟೆ ಬಿಲ್ಲವರ ಸೇವಾ ಸಂಘದ ಗೌರವ ಅಧ್ಯಕ್ಷ ಭಾಸ್ಕರ ಜತ್ತನ್, ಉಪಾಧ್ಯಕ್ಷರಾದ ಶೇಕರ್ ಬಿ.ಪೂಜಾರಿ, ಜಗದೀಶ್ ಕೆಮ್ಮಣ್ಣು, ಅರ್ಚಕ ಶಂಕರ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಉಷಾ ವಸಂತ್, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ಯಾಮ್ ಕೆ.ಪೂಜಾರಿ, ಅಧ್ಯಕ್ಷ ಟಿ.ರಾಮ ಪೂಜಾರಿ, ಕ್ರೀಡಾ ಸಂಯೋಜಕ ರಾಕೇಶ್ ಪೂಜಾರಿ ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶೇಕರ್ ಬೈಕಾಡಿ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಮುರಳಿದರ್ ಸುವರ್ಣ ವಂದಿಸಿದರು.







