ಮಲ್ಪೆ ಬೀಚ್ ಸ್ವಚ್ಛತಾ ಕಾರ್ಯಕ್ರಮ

ಉಡುಪಿ, ಫೆ.10: ಸ್ಟೂಡೆಂಟ್ ಫಾರ್ ಡೆವಲಪ್‌ಮೆಂಟ್ ಉಡುಪಿ ವತಿಯಿಂದ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದೊಂದಿಗೆ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಜಲ್, ಜಂಗಲ್, ಜಮೀನ್, ಜನ್, ಜಾನುವಾರ್ ಎಂಬ ಧ್ಯೇಯದೊಂದಿಗೆ ದೇಶಾದ್ಯಂತ ನಡೆಸಲಾಗುತ್ತಿರುವ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮತ್ತು ಜಾಗೃತಿ ಅಭಿಯಾನಗಳ ಅಂಗವಾಗಿ ಮಲ್ಪೆಯ ಕಡಲ ಕಿನಾರೆಯಲ್ಲಿ ಸ್ವಚ್ಛತೆ ಯನ್ನು ನಡೆಸಲಾಯಿತು.
ಸ್ವಚ್ಛತೆಯಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜು ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ನವೀನ್ ಸಿ.ಬಿ., ಉಡುಪಿ ನಗರ ಎಸ್‌ಎಫ್‌ಡಿ ಪ್ರಮುಖ್ ವಸುದೇವ್ ತಿಲಕ್, ಕಾಲೇಜು ಘಟಕ ಎಸ್‌ಎಫ್‌ಡಿ ಪ್ರಮುಖ್ ಹೇಮಂತ್ ಶೆಣೈ, ಸಹ ಪ್ರಮುಖ್ ದಿವ್ಯ ಮತ್ತು ಕಾಲೇಜು ಘಟಕ ಎನ್‌ಎಸ್‌ಎಸ್ ಕಾರ್ಯದರ್ಶಿಗಳಾದ ಭರತ್ ಮತ್ತು ಸುಮಾ ಹಾಜರಿದ್ದರು.
Next Story





