ತಡರಾತ್ರಿವರೆಗೂ ಧ್ವನಿವರ್ಧಕ ಬಳಕೆ: ಪ್ರಕರಣ ದಾಖಲು

ಕೋಟ, ಫೆ.13: ಮೂಡುಗಿಳಿಯಾರು ಜನ ಸೇವಾ ಟ್ರಸ್ಟ್ ವತಿಯಿಂದ ಮೂಡುಗಿಳಿಯಾರು ಅಲ್ಸೆಕೆರೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜ.10ರಂದು ಹಮ್ಮಿಕೊಳ್ಳಲಾದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೂ ಧ್ವನಿವರ್ಧಕ ಬಳಸಿರುವುದರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯೋಜಕ ದಿನೇಶ್ ಎಂಬವರು ಕಾರ್ಯಕ್ರಮ ನಡೆಸುವ ಬಗ್ಗೆ ಹಾಗೂ ಧ್ವನಿವರ್ಧಕವನ್ನು ಬಳಸಲು ಠಾಣೆಯಲ್ಲಿ ಅನುಮತಿ ಕೋರಿದ್ದು, ಷರತ್ತು ಬದ್ಧವಾದ ಸೂಚನೆಗಳೊಂದಿಗೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಧ್ವನಿವರ್ಧಕವನ್ನು ಬಳಸಲು ಅನುಮತಿ ನೀಡಲಾಗಿತ್ತು. ಜ.10ರ ಕಾರ್ಯಕ್ರಮದಲ್ಲಿ ಧ್ವನಿವರ್ಧಕವನ್ನು ನಿಯಮದಂತೆ ರಾತ್ರಿ 10ಗಂಟೆಯವರೆಗೆ ಉಪಯೋಗಿಸದೆ ಜ.11ರ ಬೆಳಗ್ಗಿನ ಜಾವ ಒಂದು ಗಂಟೆಯವರೆಗೆ ಬಳಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಧ್ವನಿವರ್ಧಕ ಸೂಚನೆಯನ್ನು ಉಲ್ಲಂಘಿಸಿರುವುದಾಗಿ ದೂರಲಾಗಿದೆ.
Next Story





