ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ವರ್ತನೆ ನಾಚಿಕೇಗೇಡು: ವೆರೋನಿಕಾ ಕರ್ನೆಲಿಯೋ

ವೇದವ್ಯಾಸ ಕಾಮತ್ - ಭರತ್ ಶೆಟ್ಟಿ
ಉಡುಪಿ: ಮಂಗಳೂರಿನ ಸಂತ ಜೆರೋಸಾ ಶಾಲೆಯ ವಿವಾದದಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ನಡೆದುಕೊಂಡ ರೀತಿ ನಾಚಿಕೇಗೇಡಿನದ್ದು ಎಂದು ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಶಾಲೆಯಲ್ಲಿ ನಡೆದ ವಿಚಾರವನ್ನೇ ನೆಪವಾಗಿಟ್ಟುಕೊಂಡು ಶಾಸಕ ವೇದವ್ಯಾಸ್ ಕಾಮತ್ ಶಾಲೆಯ ಗೇಟಿನ ಹೊರಗಡೆ ಮುಗ್ದ ಮಕ್ಕಳನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದ್ದು ಅಲ್ಲದೆ ಘೋಷಣೆಗಳನ್ನು ಕೂಗಲು ಪ್ರೇರಿಪಿಸಿರುವುದು ಖಂಡ ನೀಯ. ಅವರು ಓರ್ವ ಶಾಸಕರು ಎಂಬುದನ್ನು ಮರೆತು ನಡೆದುಕೊಂಡ ವರ್ತನೆ ನಾಗರೀಕ ಸಮಾಜ ತಲೆತಗ್ಗಿಸುವಂತ ದ್ದಾಗಿದೆ. ಶಾಸನ ರಚನೆಯಲ್ಲಿ ವಿಶೇಷ ಜವಾಬ್ದಾರಿ ಹೊಂದಿರುವ ಓರ್ವ ಶಾಸಕ ಕೇವಲ ಒಂದು ಪಕ್ಷ, ಜಾತಿಗೆ ಸೀಮಿತರಲ್ಲ ಎನ್ನುವುದನ್ನು ಅವರು ಮರೆತು ವರ್ತಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರಗಳಲ್ಲಿ ಧರ್ಮವನ್ನು ಬೆರೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದಕ್ಕೆ ನೇರ ಕಾರಣ ರಾಜಕೀಯ ಎನ್ನುವುದು ಸ್ಪಷ್ಠವಾಗಿ ಗೋಚರಿಸುತ್ತದೆ. ಇದೇ ರೀತಿ ಮುಂದುವರೆ ದಲ್ಲಿ ನಮ್ಮ ಮಕ್ಕಳು ದೇಶದ ಉತ್ತಮ ನಾಗರಿಕರಾಗಿ ಮುಂದುವರೆಯಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ. ಈ ಘಟನೆಗೆ ಸಂಬಂಧಿಸಿ ತನಿಖಾಧಿಕಾರಿ ಯನ್ನು ನೇಮಿಸಿದ್ದು ಸೂಕ್ತ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಿದ್ದರೂ ಕೂಡ ಅಂತಹವರಿಗೆ ಸೂಕ್ತ ಕ್ರಮ ನಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.







