ಕರ್ನಾಟಕ ರಾಜ್ಯ ಬಾಕ್ಸಿಂಗ್ ಸ್ಪರ್ಧಾಕೂಟ: ಉಡುಪಿ ತಂಡಕ್ಕೆ ದ್ವಿತೀಯ

ಉಡುಪಿ, ಫೆ.19: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಇತ್ತೀಚಿಗೆ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಬಾಕ್ಸಿಂಗ್ ಸ್ಪರ್ಧಾಕೂಟದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ 9 ಚಿನ್ನ, 9 ಬೆಳ್ಳಿ, 4 ಕಂಚಿನೊಂದಿಗೆ ದ್ವಿತೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಸಾಯಿ ವೈಷ್ಣವ್, ವಂದಿತ್, ಶ್ರೇಯಸ್ ಐತಾಳ್, ಮಾನ್ಸಿ ಜೆ.ಸುವರ್ಣ, ಸಾಯಿ ಸಂತೋಷ್ ಕೋಟ್ಯಾನ್, ಅರ್ಹನ್ ಅಹ್ಮದ್, ಪ್ರೀತಮ್ ವಿ. ಯಮನೂರಪ್ಪಪೂಜಾರ್, ವಿರಾಜ್ ಬಂಗೇರ ಚಿನ್ನದ ಪದಕ, ರಿಯಾನ್ಸ್ ನಂದನ್, ಸಕ್ಷಮ್, ಆರ್ಯನ್, ವಿಜಯ ಶೆಟ್ಟಿ, ಸೃಷ್ಟಿ ಶೇಟ್, ಅಖಿಲೇಶ್ ಜಿ ನಾಯ್ಕ್, ಸಚಿನ್ ಪಡುಬಿದ್ರಿ, ವಿಕೇಶ್ ಕುಲಾಲ್, ಶುಭಾಂಶ್, ಸಾಚಿ ಬೆಳ್ಳಿ ಪದಕ ಹಾಗೂ ಶ್ರೀಕರ್ ಐತಾಳ್, ಲಕ್ಷ್ಮೀಶ, ಧನವಂತ್, ಆರ್ಯನ್ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಮಹಮದ್ ಕೈಫ್, ಆದಿತ್ಯ ಪೈ, ಶ್ರೀಜೆಶ್ ನಾಯ್ಕ್ ಸಮಾಧಾನಕರ ಬಹುಮಾನ ಗಳಿಸಿದರು. ತಂಡದ ಕೋಚ್ ಶಿವಪ್ರಸಾದ ಆಚಾರ್ಯ ಉಪಸ್ಥಿರಿದ್ದರು.
Next Story





