ಕಾರ್ಮಿಕ ವಿರೋಧಿ ಕಾನೂನು ವಾಪಾಸ್ಸಿಗೆ ಆಗ್ರಹಿಸಿ ಮನವಿ

ಹಿರಿಯಡ್ಕ: ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನು ವಾಪಾಸ್ಸು ಪಡೆಯುವಂತೆ ಆಗ್ರಹಿಸಿ ಪ್ರಧಾನ ಮಂತ್ರಿಗೆ ಮತ್ತು ಶೈಕ್ಷಣಿಕ ಧನ ಸಹಾಯ ಕಡಿತ ಮತ್ತಿತರ ಸಮಸ್ಯೆಗಳನ್ನು ವಿರೋಧಿಸಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಿಡಬ್ಲ್ಯುಎಫ್‌ಐ ಪಾಡಿಗಾರ ಮತ್ತು ಹಿರಿಯಡ್ಕ ಕಟ್ಟಡ ನಿರ್ಮಾಣ ಸಂಘದ ಘಟಕಗಳ ವತಿಯಿಂದ ಪೆರ್ಡೂರು ಪಂಚಾಯತ್ ಕಾರ್ಯದರ್ಶಿ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.
ಸಿಡಬ್ಲ್ಯುಎಫ್‌ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶಶಿಧರ್ ಗೊಲ್ಲ, ಸಿಐಟಿಯು ಉಡುಪಿ ತಾಲೂಕು ಸಂಚಾಲಕ ಕವಿರಾಜ್, ಪಾಡಿಗಾರ ಘಟಕದ ಚಂದ್ರ, ವರದರಾಜ್, ವಾದಿರಾಜ ಆಚಾರ್ಯ, ಬಾಲಕೃಷ್ಣ ಆಚಾರ್ಯ ಮತ್ತು ಹಿರಿಯಡಕ ಘಟಕದ ಅದ್ಯಕ್ಷ ಸುಂದರ್ ಮೊದಲಾದವರು ಉಪಸ್ಥಿತರಿದ್ದರು.
Next Story





