ಕೋಳಿಅಂಕಕ್ಕೆ ದಾಳಿ: ಐವರು ವಶಕ್ಕೆ

ಕೋಟ: ಕೋಳಿ ಅಂಕಕ್ಕೆ ಫೆ.21ರಂದು ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೋಳಿ ಅಂಕ ನಡೆಸುತ್ತಿದ್ದ ಗುಂಡು, ಕರುಣಾಕರ, ಹರ್ಷ, ರಾಜು, ರಮೇಶ್ ಇವರನ್ನು 1000ರೂ. ನಗದು, ಕೋಳಿಗಳು, ಕೋಳಿ ಬಾಳಗಳ ಸಹಿತ ವಶಕ್ಕೆ ಪಡೆದು ಕೊಂಡಿರುವು ದಾಗಿ ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





