ಲಂಡನಿನ ವೈದ್ಯ ಎಂದು ನಂಬಿಸಿ ಮಲ್ಪೆಯ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಮಲ್ಪೆ, ಫೆ.22: ಲಂಡನಿನ ವೈದ್ಯ ಎಂಬುದಾಗಿ ನಂಬಿಸಿ ಮಲ್ಪೆಯ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನೀತ(35) ಎಂಬವರಿಗೆ ಜ.24ರಂದು ಅಪರಿಚಿತ ವ್ಯಕ್ತಿಯೊಬ್ಬ ಡಾಕ್ಟರ್ ಎಂಬುದಾಗಿ ಪರಿಚಯ ಮಾಡಿಕೊಂಡು ವಾಟ್ಸ್ಯಾಪ್ ಮೂಲಕ ಚಾಟ್ ಮಾಡಿದ್ದು, ನಂತರ ಆತನು ಲಂಡನ್‌ನಿಂದ ಭಾರತಕ್ಕೆ ಬರುವುದಾಗಿ ಹೇಳಿದ್ದನು. ಫೆ.16ರಂದು ವಿನೀತಾಗೆ ಕರೆ ಬಂದಿದ್ದು, ನಿಮ್ಮ ಸ್ನೇಹಿತ ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಕಸ್ಟಡಿಯಲ್ಲಿದ್ದು ಇವರನ್ನು ರೆಸ್ಕ್ಯೂ/ರಿಲೀವ್ ಮಾಡ ಬೇಕಾದರೆ ದಂಡ ಕಟ್ಟಬೇಕಾಗಿ ತಿಳಿಸಿದರು.
ಇದರಿಂದ ಸರಕಾರದಿಂದ ತನ್ನ ಮೇಲೆ ಕಾನೂನು ಕ್ರಮ ಆಗಬಹುದೆಂದು ಹೆದರಿದ ವಿನೀತಾ, ಹಣವನ್ನು ಪಾವತಿ ಮಾಡಿ ದರು. ಇವರು ಹೀಗೆ ಫೆ.16 ರಿಂದ 20ರವರೆಗೆ ಒಟ್ಟು 4,96,000ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿ ವಂಚನೆಗೆ ಒಳಗಾಗಿದ್ದರು ಎಂದು ದೂರಲಾಗಿದೆ.
Next Story





