ಪಾರ್ಟ್‌ಟೈಮ್ ಜಾಬ್ ಹೆಸರಿನಲ್ಲಿ ಆನ್‌ಲೈನ್ ವಂಚನೆ

ಗಂಗೊಳ್ಳಿ, ಫೆ.22: ಪಾರ್ಟ್‌ಟೈಮ್ ಜಾಬ್ ಹೆಸರಿನಲ್ಲಿ ಟ್ಕಾಸ್ಕ್ ನೀಡಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫ್ರೀನ್(30) ಎಂಬವರ ಮೊಬೈಲಿಗೆ ಆರೋಪಿಗಳು ಎಚ್.ಆರ್.ದಿವ್ಯಾ ಬೆಂಗಳೂರು ಹೆಸರಿನಲ್ಲಿ ಪಾರ್ಟಟೈಮ್ ಜಾಬ್ ಬಗ್ಗೆ ವಾಟ್ಸಾಪ್ ಲಿಂಕ್ ಕಳುಹಿಸಿದ್ದು, ಟಾಸ್ಕ್‌ಗಳಿಗೆ ಹಣ ಪಾವತಿಸುವಂತೆ ಹೇಳಿ ಹಂತ ಹಂತವಾಗಿ ಫೆ.3ರಿಂದ 14ರವರೆಗೆ ಅಫ್ರೀನ್ ಅವರಿಂದ 5,26,731ರೂ. ಹಣವನ್ನು ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ನಂತರ ಅಫ್ರೀನ್ ಖಾತೆಗೆ 57,201ರೂ. ಹಣವನ್ನು ವಾಪಾಸ್ಸು ಜಮೆ ಮಾಡಿದ್ದು ಉಳಿದ 4,69,530ರೂ. ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





