ವಿದೇಶದಲ್ಲಿದ್ದ ವ್ಯಕ್ತಿಗೆ ಆನ್‌ಲೈನ್ ವಂಚನೆ

ಉಡುಪಿ, ಫೆ.24: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಬೆಳ್ಮಣ್ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಮಣ್ ಗ್ರಾಮದ ಜಯಶೆಟ್ಟಿ ಎಂಬವರ ಮಗ ವಿದೇಶದಲ್ಲಿ ಉದ್ಯೋಗ ದಲ್ಲಿದ್ದು, ಇವರ ಎರಡು ಬ್ಯಾಂಕ್‌ಗಳ ಖಾತೆಯಿಂದ ಫೆ.10ರಿಂದ 20ರ ಮಧ್ಯಾವಧಿಯಲ್ಲಿ ಅಪರಿಚಿತರು ಆನ್‌ಲೈನ್ ಮೂಲಕ ಹಂತ ಹಂತವಾಗಿ ಒಟ್ಟು 1,56,100ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ದೂರಲಾಗಿದೆ.
Next Story





