ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮ: ಯೋಗೀಶ್ ಶೆಟ್ಟಿ

ಉಡುಪಿ, ಫೆ.25: ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಮತ್ತು ಬ್ಲಾಕ್ ಅಧ್ಯಕ್ಷರುಗಳ ಸಭೆಯು ಶನಿವಾರ ಉಡುಪಿ ಜಿಲ್ಲಾ ಪಕ್ಷ ಕಚೇರಿಯಲ್ಲಿ ಜರಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ, ಉಡುಪಿ ಜಿಲ್ಲಾ ವಿಧಾನಸಭಾ ಕ್ಷೇತ್ರದ ಪಕ್ಷದ ಸಂಘಟನೆಯನ್ನು ಚುರುಕು ಗೊಳಿಸಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ನಿಷ್ಠೆಯಿಂದ ಕೆಲಸವನ್ನು ಮಾಡಬೇಕು. ಆ ಮೂಲಕ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಕಟಿ ಬದ್ಧರಾಗ ಬೇಕು ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಜಯ ಕುಮಾರ್ ಪರ್ಕಳ, ಸುಧಾಕರ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಬ್ಲಾಕ್ ಅಧ್ಯಕ್ಷರು ಗಳಾದ ಬಾಲಕೃಷ್ಣ ಆಚಾರ್ಯ, ಶ್ರೀಕಾಂತ್ ಹೆಬ್ರಿ, ಕಿಶೋರ್ ಬಲ್ಲಾಳ್ ಮತ್ತು ಜಿಲ್ಲಾ ನಾಯಕರು ಗಳಾದ ಜಯರಾಮ ಆಚಾರ್ಯ, ದಕ್ಷತ್ ಆರ್.ಶೆಟ್ಟಿ, ರಮೇಶ್ ಕುಂದಾಪುರ, ಸಂಜಯ್ ಕುಮಾರ್, ಉದಯ ಆರ್.ಶೆಟ್ಟಿ, ವೆಂಕಟೇಶ್ ಎಂ.ಟಿ., ರಾಮ ರಾವ್, ದೇವರಾಜ್ ತೊಟ್ಟಂ, ಕೀರ್ತಿ ರಾಜ್, ಅಶ್ರಫ್ ಪಡುಬಿದ್ರಿ, ಬಿ.ಕೆ. ಮುಹಮ್ಮದ್, ಯು.ಎ.ರಶೀದ್, ಸತೀಶ್ ಪೂಜಾರಿ, ಹರೀಶ್ ಹೆಗ್ಡೆ, ರಂಗ ಕೋಟ್ಯಾನ್, ಸುಮಿತ್ ಪರ್ಕಳ, ಉದಯ ಕುಮಾರ್, ರವಿಚಂದ್ರ ಹೆಗ್ಡೆ, ದಯಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







