ಪಾಂಡುರಂಗ ಶಾನುಬಾಗ್‌ಗೆ ಸೇವಾ ಭೂಷಣ ಪ್ರಶಸ್ತಿ ಪ್ರದಾನ

ಉಡುಪಿ, ಫೆ.25: ಯಕ್ಷಗಾನ ಕಲಾರಂಗದಲ್ಲಿ 27 ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್.ಗೋಪಾಲ ಕೃಷ್ಣರ ನೆನಪಿನಲ್ಲಿ ನೀಡುವ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವು ಶನಿವಾರ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಜರಗಿತು.
ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ನಿವೃತ್ತ ಬ್ಯಾಂಕ್ ಅಧಿಕಾರಿ, ಸಾವಯವ ಕೃಷಿಕ, ದೃಷ್ಟಿ ತೊಡಕನ್ನು ಮೀರಿನಿಂತ ಸಾಧಕ ಪಿ. ಪಾಂಡುರಂಗ ಶಾನುಬಾಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭ ಇತ್ತೀಚೆಗೆ ಪಿಎಚ್.ಡಿ ಪದವಿ ಪಡೆದ ರಂಗ ಸಾಧಕಿ ಡಾ. ಬ್ರಾಮರಿ ಶಿವಪ್ರಕಾಶ್ ಅರವರನ್ನು ಗೌರವಿಸಲಾ ಯಿತು. ಸಂಸ್ಥೆಗೆ ದೊಡ್ಡ ಮೊತ್ತ ನೀಡಿ ಸಹಕರಿಸಿದ ಸುಬ್ರಹ್ಮಣ್ಯ ಬೈಪಡಿತ್ತಾಯ ಅವರನ್ನು ಗೌರವಿಸಲಾಯಿತು. ಪಾಂಡು ರಂಗ ಶಾನುಭಾಗರ ವಿದ್ಯಾ ಗುರುಗಳಾದ ಮಧ್ವರಮಣ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತ ನಾಡಿ, ಕಾರ್ಯಕ್ರಮ ನಿರ್ವಹಿಸಿ ದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್ ಹಾಗೂ ಎಸ್.ಗೋಪಾಲಕೃಷ್ಣ ಕುರಿತ ಸಂಸ್ಮರಣ ಭಾಷಣ ವಾಡಿದರು. ನಾರಾಯಣ ಎಂ.ಹೆಗಡೆ, ಪಾಂಡುರಂಗ ಶಾನುಭಾಗ್ ಅತಿಥಿಗಳನ್ನು ಪರಿಚಯಿಸಿದರು. ಎಚ್.ಎನ್.ಶೃಂಗೇಶ್ವರ ವಂದಿಸಿದರು.





