ಗಂಗೊಳ್ಳಿ: ಸಾವಿರಾರು ರೂ. ಮೌಲ್ಯದ ಅಡಿಕೆ ಕಳವು

ಗಂಗೊಳ್ಳಿ, ಫೆ.26: ಮನೆಯ ಹೊರಗಡೆ ಇಟ್ಟಿದ್ದ ಸಾವಿರಾರು ರೂ. ಮೌಲ್ಯದ ಅಡಿಕೆ ತುಂಬಿದ ಚೀಲಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಫೆ.25ರಂದು ರಾತ್ರಿ ವೇಳೆ ನೂಜಾಡಿ ಗ್ರಾಮದಲ್ಲಿ ನಡೆದಿದೆ.
ನೂಜಾಡಿ ಗ್ರಾಮದ ಡಾ.ಚಂದ್ರಶೇಖರ ಎಂಬವರು ಅಡಿಕೆ ಕೃಷಿಯಲ್ಲಿ ಬಂದ ಅಂದಾಜು 160 ಕೆಜಿ ತೂಕದ ಅಡಿಕೆಯನ್ನು 4 ಚೀಲಗಳಲ್ಲಿ ತುಂಬಿಸಿ ಮಾರಾಟ ಮಾಡಲು ಮನೆಯ ಸಿಟ್ ಔಟ್ ಬಳಿ ಇಟ್ಟಿದ್ದರು. ರಾತ್ರಿ ವೇಳೆ ಕಳ್ಳರು ಈ ನಾಲ್ಕೂ ಚೀಲಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಕೃತ್ಯವನ್ನು ಸುದೇಶ ಮತ್ತು ನಾಗೇಶ ಎಂಬವರು ನಡೆಸಿರುವ ಬಗ್ಗೆ ಅನುಮಾನ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





