ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ಹಿತೇಶ್ ಕೋಯಾ ನೇಮಕ
![ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ಹಿತೇಶ್ ಕೋಯಾ ನೇಮಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ಹಿತೇಶ್ ಕೋಯಾ ನೇಮಕ](https://www.varthabharati.in/h-upload/2024/04/02/1257898-hithesh-k-koya2.webp)
ಹಿತೇಶ್ ಕೋಯಾ
ಉಡುಪಿ, ಎ.2: 2024ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ 2008ನೇ ಬ್ಯಾಚ್ನ ಐಎಎಸ್ ಅಧಿಕಾರಿ ಹಿತೇಶ್ ಕೆ. ಕೋಯಾ ಅವರನ್ನು ನೇಮಕ ಮಾಡಲಾಗಿದೆ.
ಗುಜರಾತ್ ಕೇಡರ್ನ ಅಧಿಕಾರಿಯಾಗಿರುವ ಹಿತೇಶ್ ಕೆ.ಕೋಯಾ ಅವರು ಗಾಂಧಿನಗರದಲ್ಲಿ ಅಭಿವೃದ್ಧಿ ಆಯುಕ್ತರಾಗಿದ್ದಾರೆ. ಅವರು ಎ.4ರಿಂದ ಚುನಾವಣೆ ಮುಗಿಯುವವರೆಗೆ ಜೂ.4ರವರೆಗೆ ಉಡುಪಿಯಲ್ಲಿರುತ್ತಾರೆ.
ಚುನಾವಣಾ ವೀಕ್ಷಕರ ಕಚೇರಿಯನ್ನು ನಗರದ ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ತೆರೆಯಲಾಗಿದ್ದು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂ.ಸಂಖ್ಯೆ: 0820-2001203, ಮೊ.ನಂ:9482245032ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Next Story