ಕೋಳಿ ಅಂಕಕ್ಕೆ ದಾಳಿ: ಐವರ ಬಂಧನ
![ಕೋಳಿ ಅಂಕಕ್ಕೆ ದಾಳಿ: ಐವರ ಬಂಧನ ಕೋಳಿ ಅಂಕಕ್ಕೆ ದಾಳಿ: ಐವರ ಬಂಧನ](https://www.varthabharati.in/h-upload/2024/04/03/1258247-arrest.webp)
ಕಾರ್ಕಳ, ಎ.3: ಕೋಳಿಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿರುವ ಘಟನೆ ಎ.2ರಂದು ಬೆತ್ತೊಟ್ಟು ಎಂಬಲ್ಲಿ ನಡೆದಿದೆ.
ಉದಯ ಎಂಬಾತ ಬಂಧಿತ ಆರೋಪಿ. ಸತೀಶ, ಜಯ, ಗಣೇಶ, ಉಮೇಶ, ಸುರೇಶ ಮತ್ತಿತರು ಪೊಲೀಸ್ ದಾಳಿ ವೇಳೆ ಓಡಿ ಪರಾರಿ ಯಾಗಿದ್ದಾರೆ. ದಾಳಿ ವೇಳೆ 3 ಕೋಳಿಗಳನ್ನು ಮತ್ತು 4 ವಾಹನಗಳನ್ನು ಹಾಗೂ 900ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story