ನಕಲಿ ದಾಖಲೆ ಸೃಷ್ಠಿಸಿ ಉದ್ಯಮ ಪರವಾನಿಗೆ: ಪ್ರಕರಣ ದಾಖಲು
ಕುಂದಾಪುರ: ಪಿಡಿಓ ಹಾಗೂ ಗ್ರಾಪಂ ಅಧ್ಯಕ್ಷರ ನಕಲಿ ಸಹಿ ಮಾಡಿ ಉದ್ಯಮ ಪರವಾನಿಗೆಯ ನಕಲಿ ದಾಖಲಾತಿಯನ್ನು ಸೃಷ್ಟಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕಾಶ್ ಎಂಬಾತ ಫೆ.26ರಂದು ಕೋಟೇಶ್ವರ ಗ್ರಾಮ ಪಂಚಾಯತ್ಗೆ ಆಗಮಿಸಿ ಕೋಟೇಶ್ವರ ಗ್ರಾಮದ 1-24(ಅ) ಮೀನು ಮಾರುಕಟ್ಟೆ ರಸ್ತೆಯ ಬಳಿ ಇರುವ ಸಿಎಸ್ಪಿ ಕಲೆಕ್ಷನ್ ಎಂಬ ಹೆಸರಿನ ಬಟ್ಟೆ ಅಂಗಡಿಯ ಉದ್ಯಮ ಲೈಸೆನ್ಸ್ನ್ನು ತೋರಿಸಿ ದ್ದರು. ಈ ಪರವಾನಿಗೆಯನ್ನು ಗ್ರಾಪಂನಲ್ಲಿ ಪರಿಶೀಲಿಸಿ ದಾಗ ಗ್ರಾಪಂನಿಂದ ಬಟ್ಟೆ ಅಂಗಡಿ ಉದ್ಯಮ ಪರವಾನಿಗೆಯನ್ನು ನೀಡಿರುವುದು ಕಂಡುಬಂದಿರುವುದಿಲ್ಲ.
ಪರವಾನಿಗೆಯನ್ನು ಆರೋಪಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರ ನಕಲಿ ಸಹಿ ಮಾಡಿ ಬಟ್ಟೆ ಅಂಗಡಿ ಉದ್ಯಮ ಪರವಾನಿಗೆಯ ನಕಲಿ ದಾಖಲಾತಿಯನ್ನು ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ದೂರ ಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story