ರೌಡಿ ಶೀಟರ್ ಮನೆಗೆ ದಾಳಿ: ಮದ್ದುಗುಂಡು ಸಹಿತ ಹಲವು ಸೊತ್ತು ವಶ
![ರೌಡಿ ಶೀಟರ್ ಮನೆಗೆ ದಾಳಿ: ಮದ್ದುಗುಂಡು ಸಹಿತ ಹಲವು ಸೊತ್ತು ವಶ ರೌಡಿ ಶೀಟರ್ ಮನೆಗೆ ದಾಳಿ: ಮದ್ದುಗುಂಡು ಸಹಿತ ಹಲವು ಸೊತ್ತು ವಶ](https://www.varthabharati.in/h-upload/2024/04/03/1258255-15000.webp)
ಹಿರಿಯಡ್ಕ, ಎ.3: ರೌಡಿ ಶೀಟರೊಬ್ಬನ ಮನೆಗೆ ದಾಳಿ ಎ.2ರಂದು ನಡೆಸಿದ ಹಿರಿಯಡ್ಕ ಪೊಲೀಸರು ಕೋವಿ, ಮದ್ದುಗುಂಡುಗಳು ಸೇರಿದಂತೆ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಹಿರಿಯಡ್ಕ ಎಸ್ಸೈ ಮಧು ಬಿ.ಇ. ದಿವಾಕರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಮನೆಗೆ ತೆರಳಿ ಪರಿಶೀಲಿಸಿದ್ದು, ಆಗ ಸಜೀವ ಮದ್ದು ಗುಂಡುಗಳು, ಮಸಿ ಕೋವಿಗೆ ಬಳಸುವ ಮದ್ದುಗುಂಡುಗಳು, ಡೆಟೋನೇಟರ್ಗಳು, ಪ್ರಾಣಿಯ ಹಲ್ಲಿನ ಆಕಾರದ ಸ್ವತ್ತುಗಳು, ಪ್ರಾಣಿಯ ಉಗುರಿನ ಆಕಾರದ ಸ್ವತ್ತುಗಳು, ಪಿಸ್ತೂಲ್ಗೆ ಬಳಸುವ 7.65 ಎಂಎಂ ಸಜೀವ ಗುಂಡುಗಳು, ಕೋವಿಯ ಮರದ ಬಟ್, ಹಾಕಿ ಸ್ಟಿಕ್, ಸ್ಟೀಲ್ ಚಾಕುಗಳು, ಮಚ್ಚು, ಒಣಗಿಸಿದ ಗಾಂಜಾ, ಸ್ಪಿರೀಟ್ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story