ಮಿನಿ ಗೂಡ್ಸ್ ಢಿಕ್ಕಿ: ವೃದ್ಧೆ ಮೃತ್ಯು
ಕುಂದಾಪುರ, ಎ.27: ಅತಿವೇಗವಾಗಿ ಬಂದ ಮಹೇಂದ್ರ ಬೊಲೆರೋ ಮಿನಿ ಗೂಡ್ಸ್ ಒಂದು ರಸ್ತೆ ದಾಟಲು ನಿಂತಿದ್ದ ವೃದ್ಧೆಗೆ ಢಿಕ್ಕಿ ಹೊಡೆದ ಪರಿಣಾಮ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಅರಾಹ್ನ ಹಂಗಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಶೋಭಾ ಜಿ.ಬಿಲ್ಲವ (65) ಎಂದು ಗುರುತಿಸಲಾಗಿದೆ. ಹಂಗಳೂರಿನ ನಗು ಪ್ಯಾಲೇಸ್ ಎದುರಿನ ರಾ.ಹೆದ್ದಾರಿ ಯಲ್ಲಿ ರಸ್ತೆ ದಾಟಲು ಬದಿಯಲ್ಲಿ ನಿಂತಿದ್ದ ಶೋಭಾರಿಗೆ ಕುಂದಾಪುರದಿಂದ ಉಡುಪಿಯತ್ತ ಸಾಗುತಿದ್ದ ಮಿನಿ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದಿತ್ತು. ಪರಿಣಾಮ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾದ ಶೋಭಾರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು.
ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story