ಉಡುಪಿ: ವಾಶ್ ರೂಮ್ನಲ್ಲಿ ಬಿದ್ದು ರಷ್ಯಾ ಮೂಲದ ಮಹಿಳೆ ಮೃತ್ಯು
ಉಡುಪಿ, ಮೇ 8: ವಾಶ್ ರೂಮ್ನಲ್ಲಿ ಸ್ನಾನ ಮಾಡುವ ವೇಳೆ ಬಿದ್ದು ರಶ್ಯಾ ಮೂಲದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ಪುತ್ತೂರು ಎಂಬಲ್ಲಿ ಮೇ 7ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಸಲ್ಟನಟ್ ಬೆಕ್ಟೆನೋವಾ(51) ಎಂದು ಗುರುತಿಸಲಾಗಿದೆ. ರಷ್ಯಾ ನಿವಾಸಿಯಾಗಿರುವ ಇವರು 2009ರಲ್ಲಿ ಮಣಿಪಾಲದ ಸಿಎನ್ಐ ಚರ್ಚ್ನಲ್ಲಿ ಕುಲಿನ್ ಮಹೇಂದ್ರ ಷಾ ಎಂಬವರನ್ನು ಮದುವೆಯಾಗಿದ್ದರು. ಒಂದು ವರ್ಷದ ಹಿಂದೆ ಕುಲಿನ್ ಮಹೇಂದ್ರ ಷಾ ಮೃತಪಟ್ಟಿದ್ದು, ಆ ಬಳಿಕ ಸಲ್ಟನಟ್ ತನ್ನ ಮಗಳೊಂದಿಗೆ ಪುತ್ತೂರಿನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ವೇಳೆ ಅವರು ಮನೆಯ ವಾಶ್ ರೂಮ್ನಲ್ಲಿ ಸ್ನಾನ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story