ಎಸೆಸೆಲ್ಸಿ: ಹೂಡೆ ಸಾಲಿಹಾತ್ ಶಾಲೆಗೆ ಉತ್ತಮ ಫಲಿತಾಂಶ
ಫಾಝಿಲಾ, ಶೈಮಾ
ಉಡುಪಿ, ಮೇ 9: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉತ್ತಮ ಸಾಧನೆ ಮಾಡಿದೆ.
ಪರೀಕ್ಷೆ ಬರೆದ ಒಟ್ಟು 78 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಉತ್ತೀರ್ಣ ಗೊಂಡು ಶೇ.98.7% ರಷ್ಟು ಫಲಿತಾಂಶ ದಾಖಲಿಸಿದೆ. ವಿಶಿಷ್ಟ ಶ್ರೇಣಿಯಲ್ಲಿ 13, ಪ್ರಥಮ ಶ್ರೇಣಿ 18, ದ್ವೀತಿಯ ಶ್ರೇಣಿ, 35, ತೃತೀಯ ಶ್ರೇಣಿ 11 ವಿದ್ಯಾರ್ಥಿಗಳು ಫಲಿತಾಂಶ ದಾಖಲಿಸಿದ್ದಾರೆ.
ಫಾಝಿಲಾ ರಹಮತ್ತುಲ್ಲ ನಾಕ್ವಾ 625ರಲ್ಲಿ 575(ಶೇ.92) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅದೇ ರೀತಿ ಶೈಮಾ ಶಬ್ಬೀರ್ 564 (ಶೇ. 90.24) ಅಂಕ ಗಳಿಸಿದ್ದಾರೆ.
Next Story