ಹಿರಿಯ ನಾಗರಿಕರಿಗೆ ಮೊಬೈಲ್ ಅಪ್ಲಿಕೇಶನ್‌ಗಳ ತರಬೇತಿ

ಮಣಿಪಾಲ: ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್‌ನಲ್ಲಿ ಹಿರಿಯ ನಾಗರಿಕರಿಗಾಗಿ ದೈನಂದಿನ ಜೀವನ(ಐಎಡಿಎಲ್) ಸಾಧನಗಳ ಚಟುವಟಿಕೆ ಗಳಿಗೆ ಮೊಬೈಲ್ ಅಪ್ಲಿಕೇಶನ್ಗಳನ್ನು ಬಳಸುವ ಕುರಿತು ಪ್ರಾಯೋಗಿಕ ತರಬೇತಿಯನ್ನು ಆಯೋಜಿಸಲಾಗಿತ್ತು.
ಮೊಬೈಲ್ ಅಪ್ಲಿಕೇಶನ್‌ಗಳ ಮಹತ್ವದ ಕುರಿತು ಮಣಿಪಾಲ ನರ್ಸಿಂಗ್ ಕಾಲೇಜಿನನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಶಶಿಧರ ವೈ.ಎನ್. ಮಾಹಿತಿ ನೀಡಿದರು. ನಂತರ ಸೈಬರ್ ಸುರಕ್ಷತೆ ಮತ್ತು ಸಂವಹನಕ್ಕಾಗಿ ಮೊಬೈಲ್ ಅಪ್ಲಿಕೇಶನ್ಗಳನ್ನು ಬಳಸುವ ಕುರಿತು ಪ್ರಾಧ್ಯಾಪಕ ರಾಘವೇಂದ್ರ ಜಿ. ಮಾಹಿತಿ ನೀಡಿದರು.
ರೋಟರಿ ಕ್ಲಬ್ ಮಣಿಪಾಲ ಹಿಲ್ಸ್‌ನ ಅಧ್ಯಕ್ಷ ಸಿ.ರಮಾನಂದ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಯು.ಮಾಧವ ಮಯ್ಯ ವಂದಿಸಿದರು. ಸಂಶೋಧನಾ ಸಿಬ್ಬಂದಿಗಳಾದ ಅಶ್ವಿನಿ ಕೆ ಮತ್ತು ಅರ್ಪಿತಾ ಸಹಕರಿಸಿದರು.
Next Story





